Thursday, November 13, 2008

ಜೋಕಾಲಿ...

ಕಣ್ಣೀರಲ್ಲೇ ಅಂಗಳ ಸಾರಿಸಿ
ಹಾಕಿ ಆಸೆಯ ರಂಗೋಲಿ
ಉಕ್ಕುವ ದುಃಖದ ಶಹನಾಯಿ
ಮನದಲಿ ಗೊಂದಲ ಕವ್ವಾಲಿ...

ಹೃದಯ ಬಿರಿದರೂ
ಅತ್ತು ಕರೆದರೂ
ಅವಳು ಬರುವ ಹಾದಿ ಖಾಲಿ ಖಾಲಿ...
ಎದೆಯಲಿ ಕೂಗಿನ
ಪ್ರತಿಧ್ವನಿ ಉಳಿಯಿತು
ನೆನಪಿನ ಹೆಣವಾಡಿತ್ತು ಜೋಕಾಲಿ...

ಹೀಗೊಂದು ಧ್ವಂದ್ವ...

ದೇವಸ್ಥಾನದ ಮುಂದೆ ಬರೆದೈತೆ
ಚಪ್ಲಿ ಬಿಟ್ಟು ಒಳಗೆ ಹೋಗಬೇಕಂತೆ!
ನಿನ್ ಪ್ರೀತೀಲಿ ಮನ್ಸು ಕೆಟ್ಟು ಕೆರ ಹಿಡಿದೈತೆ
ಅದನ್ನೆಲ್ಲಿ ಬಿಟ್ಟು ಹೋಗ್ಲಿ ಅನ್ನೊ ಚಿಂತೆ!